Social Service 

 The best way to find yourself is to lose yourself in the service of others.  

Mahatma Gandhiji

 Liberty 

 So long as you do not achieve social liberty, whatever freedom is provided by the law is of no avail to you. 

  Baba Saheb Ambedkar  

 Philanthropy 

 The more we come out and do good to others, the more our hearts will be purified, and God will be in them. 

 Swami Vivekananda 

 Sincerity 

 Once you start a working on something, don't be afraid of failure and don't abandon it. People who work sincerely are the happiest.  

 Chanakya 

 Discipline 

 Your job might be only to clean a railway-crossing, but it is for you to malke it so clean that no onther crossing in the world is as clean as your's. 

 Sir M Vishweshwarayya 

Welcome

ಭಾರತದ ಸರ್ವ ಕ್ಷೇತ್ರಗಳ ಸಮಸ್ಯೆಗಳಿಗಾಗಿ ರಾಜಕೀಯ ಕ್ಷೇತ್ರದ ಅಸ್ಥಿರತೆಯೇ ಕಾರಣ ಎಂಬುದು ನಿರ್ವಿವಾದ. ಶ್ರೇಷ್ಠ ಸಂವಿಧಾನ ಹೊಂದಿರುವ ನಾಡಿನಲ್ಲಿ ರಾಜಕೀಯ ಆಯಮಗಳು ಅಸಂಘಟಿತವಾಗಿ ಅಸ್ತಿತ್ವಕಂಡಿರುವುದು ದುರಾದೃಷ್ಟಕರ ಸಂಗತಿ. ಪ್ರಸ್ತುತ ಕಾಲಪುಟದಲ್ಲಿ ರಾಜಕೀಯ ವ್ಯವಸ್ಥೆಯು ಊಹಿಸಲಾರದ ಭ್ರಷ್ಟಚಾರದ ಕೆನ್ನಾಲಿಗೆಯಲ್ಲಿ ಅವಿತುಹೋಗಿರುವುದು ವಾಸ್ತವ. ಇಂತಹ ಸಂದ್ರ್ಭದಲ್ಲಿ ಭಾರತೀಯ ಪ್ರಜಾವರ್ಗ, ವಾಗ್ಮಿಗಳನ್ನು, ಶೈಕ್ಷಣಿಕ ಸಂಪನ್ನರನ್ನು ಅಧಿಕಾರ್ದ ಗದ್ದುಗೆಯಲ್ಲಿ ಆರೇಹಣ ಮಾಡಲು ಚಿಂತಿಸುತ್ತಿರುವುದು.

ಈ ನಿಟ್ಟಿನಲ್ಲಿ ಕರುನಾಡ ವಿಧಾನಸೌಧ ಚುನಾವಣೆ, ಅತ್ಯಂತ ಮಹತ್ವಪಡೆದುಕೊಂಡಿದೆ. ಪ್ರಸ್ತುತ ವಿಧಾನಸೌಧ ಚುನಾವಣೆಗೆ ಸಾಂಸ್ಕೃತಿಕ ನಗರಿಯ ಉದ್ಯಮ ದಿಗ್ಗಜ, ಸಾಮಾಜಿಕ ರತ್ನ ಪ್ರಶಸ್ತಿ ಪುರಸ್ಕೃತ, ನಾಡೋಜ ದೇಜಗೌ ಪ್ರಶಂಸೆಗೆ ಪಾತ್ರರಾದ ಶ್ರೀ ಟಿ. ಆರ್. ಚಂದ್ರಶೇಖರ್ ರವರು ಸ್ಪರ್ಧೆಬಯಸಿರುವುದು ಪ್ರಜಾಪ್ರಭುತ್ವ ತತ್ವಕ್ಕೆ ಪೂರಕವಾಗಿದೆ. ಇವರ ಸ್ಪರ್ಧೆ ಸಾಹಿತ್ಯ-ಸಂಸ್ಕೃತಿ ಸಂಪನ್ನ ನಾಡಿನಲ್ಲಿ ಒಂದು ಮೇಲ್ಮಟ್ಟದ ಚರ್ಚೆಗೆ ಕಾರಣೀಭೂತವಾಗಿದೆ.

ಪ್ರಜ್ಞಾವಂತ ಮತದಾರರು, ಸ್ವಪ್ರೇರಣೆಯಿಂದ ಚಂದ್ರಶೇಖರ್ ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಸೃಜನಶೀಲ ವ್ಯಕ್ತಿತ್ವದ ಚಂದ್ರಶೇಖರ್ ಎದುರಾಳಿಗಳಲ್ಲಿ ನಡುಕಹುಟ್ಟಿಸಿರುವುದು ಉತ್ಪ್ರೇಕ್ಷೆ ಮಾತಲ್ಲ. ಬದಲಾವಣೆಯ ನಿರೀಕ್ಷೆಯಲ್ಲಿರುವ ನಾಗರೀಕವರ್ಗವು ಇವರ ಶಾಸಕ ಸ್ಥಾನವನ್ನು ಮಾನ್ಯಮಾಡುವ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಚಂದ್ರಶೇಖರ್ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ. ಇವರ ತಂದೆ ಶ್ರೀ ಟಿ.ಜಿ. ರಂಗಶಾಮಯ್ಯ ಹಾಗೂ ತಾಯಿ ಶ್ರೀಮತಿ ಸರಸಮ್ಮನವರು. ಇವರಿಗೆ ಶಾಲಾ ಕಾಲೇಜಿಗೆ ಹೋಗುವಾಗಿನಿಂದಲೂ ಈ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆಯನ್ನು ಕೊಡಬೇಕು ಎಂಬ ಮಹದಾಸೆ ಇತ್ತು. ಅದಕ್ಕಾಗಿ ಇವರ ಮನಸ್ಸು ಮುಂದೂ ಎಂದೆಂದೂ ಕೂಡ ಹಾತೊರೆಯುತ್ತಾ ಬಂದಿದೆ. ಅದು ಚಂದ್ರಶೇಖರ್ ಅವರ ಹುಟ್ಟುಗುಣ.

ಇವರು ಜಿಲ್ಲಾ ಜೆ.ಡಿ.ಎಸ್ ವತಿಯಿಂದ ಆಯೋಜನೆ ಮಾಡಿದ್ದ ಅಹೋರಾತ್ರಿ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನಾಡಿನ ಜನತೆಯ ಬರಗಾಲ ನಿವಾರಣೆಗೆ ಅಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾಗಿದ್ದ ರಾಜಣ್ಣನವರ ನೇತೃತ್ವದಲ್ಲಿ ಬೈಕ್ ರ್‍ಯಾಲಿಯ ಮೂಲಕ ಮೈಸೂರಿನಿಂದ ತಲಕಾವೇರಿ ತಲುಪಿ ವರುಣದೇವನ ಕೃಪೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿ ಅದರಲ್ಲಿ ಸ್ವಯಂ ಪಾಲ್ಗೊಂಡಿದ್ದರು.

ಸಾಂವಿಧಾನಿಕ ತತ್ವಗಳಿಗೆ ಧಕ್ಕೆಯುಂಟಾದ ಪ್ರತಿಯೊಂದು ಸಂದರ್ಭದ ಹೋರಾಟದಲ್ಲೂ ಇವರು ಹುರುಪಿನಿಂದ ಪಾಲ್ಗೊಳ್ಳುತ್ತಾರೆ. ಜೆ.ಡಿ.ಎಸ್ ವತಿಯಿಂದ ಆಯೋಜನೆಗೊಳ್ಳೂವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಇವರು ಸಾಮಾಜಿಕ ಚಟುವಟಿಕೆಗಳು ಹಾಗೂ ಮಹಿಳಾ ಸಬಲೀಕರಣ ಪರವಾದ ನಡಿಗೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ.

ಇವರು ಅಣ್ಣಾ ಹಜಾರೆ ಹೋರಾಟದ ಸಂದರ್ಭದಲ್ಲಿ ಪ್ರೋ. ಸುಧಾಕರ ಹೊಸಳ್ಳಿ ವಿರಚಿತ "ಹಜಾರೆ ಮತ್ತು ಜನಲೋಕಪಾಲ್" ಎಂಬ ಕೃತಿಯನ್ನು ಮುದ್ರಿಸಿ ೧೫ ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿಕೆ ಮಾಡಿದ್ದಾರೆ.

ಸದ್ಯ ಮೈಸೂರಿನಲ್ಲಿ ನೆಲೆಸಿರುವ ಟಿ.ಅರ್.ಚಂದ್ರಶೇಖರ್ ನಗರದ ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆಲ್ಲ ಪ್ರತಿಸ್ಪಂದಿಸುತ್ತ ನಗರದ‌ ಪ್ರಮುಖ ವಿಚಾರವಂತ‌ ರಾಜಕಾರಿಣಿಯಾಗಿದ್ದಾರೆ.

VOTE BOX

Vote Now!

Excellent
Good
Average
Cant Say

Current Results

VISITORS COUNT